
ಮನಸಿನಲ್ಲಿ ಪ್ರತಿಸಲ ನೂರಾರೂ ಸಾವಿರಾರೂ ಭಾವನೆಗಳು. ಪ್ರತಿಯೊಂದು ಒಂದಕ್ಕಿಂತ ಇನ್ನೊಂದು ಭಿನ್ನ-ವಿಭಿನ್ನ. ಪ್ರತಿಯೊಂದು ಭಾವನೆಗಳು ಅದರದೇ ಆದ ಸ್ವಂತ: ಚಿತ್ರಗಳನ್ನು ಮನ: ಪಟಲದ ಮೇಲೆ ಮೂಡಿಸಿ ಬಿಡುತ್ತವೆ. ಭಾವನೆಗಳು ಬಂದು ಹೋಗುವಾಗ ಅವುಗಳೇ ಮೂಡಿಸಿದ ಚಿತ್ರಗಳು ಮೂಡಿ ಮಾಯವಾಗಿತ್ತವೆ. ಮನಸು ಸಂತೋಷವಾಗಿರುವಾಗ ಮೂಡಿಸುವ ಚಿತ್ರಗಳು ಅದೇ ಮನಸು ಮುನಿಸಿನೊಂದಿಗೆ ಮೂಡಿಸಿದ ಚಿತ್ರಗಳು, ಚಿತ್ರ-ವಿಚಿತ್ರ. ಇಂತಹ ಚಿತ್ರ-ವಿಚಿತ್ರಗಳನ್ನು ಸ್ವಚಿತ್ರವಾಗಿಸಲು ನನ್ನದೊಂದು ಪ್ರಯಾಸದ ಪ್ರಯತ್ನ. ಮನಸಿನ ಭಾವನೆಗಳ ಚಿತ್ರಗಳೇ ಅಕ್ಷರಗಳ ರೂಪ ಪಡೆದು ಬರಹಗಳಾದ ಈ ನನ್ನ ಪತ್ರಗಳು...